ರಜೆ ಬಂದಿದೆ ಸಾಧ್ಯವಾದರೆ ಈ ಹಾಡನ್ನು ಮಕ್ಕಳಿಗೆ ಹೇಳಿಕೊಡಿ... ನಾವು ಸಣ್ಣವರಿದ್ದಾಗ ಈ ಹಾಡು ನಮಗೆ ಭಯ ತರಿಸಿತ್ತು.. ಆದರೆ ಈಗ ಮಕ್ಕಳ ಕುರಿತ ಇಂತಹ ಹಾಡುಗಳೇ ಕಣ್ಮರೆಯಾಗಿವೆ.. ಅಥವಾ ಮುಖ್ಯನೆಲೆಗೆ ಬರುತ್ತಿಲ್ಲ...
ಚಿತ್ರ : ಬೆಟ್ಟದ ಹೂವು
ಪಟ್ಟೆ ಹುಲಿ ಬಲು ಕೆಟ್ಟ ಹುಲಿ
ಕಾಡಲಿ ಬರುತಿತ್ತು
ಕತ್ತಲಲಿ ಆರ್ಭಟಿಸುತಲಿ
ಸುತ್ತಲು ನೋಡಿತ್ತು
ಹೊಟ್ಟೆಯ ಹಸಿವಲಿ ಕೆಟ್ಟೆನು ಎನ್ನುತ
ಬೇಟೆಯ ಹುಡುಕಿತ್ತು
ಆ ಹುಲಿಯ ಕೂಗನು ಕೇಳಿ
ಕಾಡೇ ನಡುಗಿತ್ತು
ಬಣವೆಯ ಬಳಿಯಲಿ ರಾಕ್ಷಸನಂತೆ ಬೆಳೆದ ಮರವಿತ್ತು
ಎಲೆಗಳ ಮರೆಯಲಿ ಕುಳಿತ ಬೇಡನ ಕಣ್ಗಳು ಅರಳಿತ್ತು
ಪಟ್ಟೆಯ ಹುಲಿಯನು ಹುಡುಕಿತ್ತು
ಒಣಗಿದ ತರಗೆಲೆ ತುಳಿಯುತ ಮೆಲ್ಲನೆ ಆ ಹುಲಿ ಬರುತಿತ್ತು
ಸರ ಸರ ಗರಗರ ನಡೆಯುವ ಸದ್ದಿಗೆ ಮೊಲಗಳು ಬೆದರಿತ್ತು
ಜಿಂಕೆಯ ಮರಿಗಳು ಬೆಚ್ಚಿತ್ತು
ಚಂದ್ರನ ಬೆಳಕಲಿ ಮಿಣ ಮಿಣ ಹೊಳೆವ ಆಕೃತಿ ಕಂಡಿತ್ತು
ಬೇಡನ ಕೈಗಳ ತುಪಾಕಿ ಆ ಕ್ಷಣ ಗುಂಡನು ಸಿಡಿಸಿತ್ತು
ಗುಂಡಿನ ಸದ್ದಿಗೆ ಆ ಹುಲಿ ರೋಷದಿ ತಲೆಯನು ಎತ್ತಿತ್ತು
ನೋವನು ತಾಳದೆ ಆರ್ಭಟಿಸುತ್ತಾ ಆ ಹುಲಿ ಓಡಿತ್ತು
ಬೆಳಕಿಗೆ ಬಾರದೆ ಗುಹೆಯಲಿ ಅಡಗಿ ವೇದನೆ ಪಡುತಿತ್ತು
ಸಾಯದೆ ಉಳಿದ ಆ ಹುಲಿರಾಯನು ಇಂದೂ ಅಲ್ಲಿರುವ
ಹಳದಿಯ ಕಣ್ಣಿನ ಆ ಮೃಗರಾಯನು ಹಲ್ಲನು ಮಸೆದಿರುವ
ಸೇಡಲಿ ಕಾಯುತ ಕುಳಿತಿರುವ....

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ