ಗುರುವಾರ, ಜೂನ್ 27, 2019

ಮೊದಲ ಸಲವಲ್ಲ

https://www.youtube.com/watch?v=IbmdeAgyF8Q&feature=share
ಮೊದಲ ಸಲವಲ್ಲ
ಈ ಮಿನುಗುವುದು, ಈ ತೆರೆಯುವುದು,
ಈ ಹನಿಯುವುದು

ಮೊದಲ ಸಲವಲ್ಲ
ಒಂದು ಚಿಗುರೀತೆಂದು ಹತ್ತು ಬಿತ್ತವುದು,

ವಿಫಲ, ಎಷ್ಟು ಸಲ
ತುಡಿಯುವುದು, ಕ್ಷಣಮಾತ್ರ ತಣಿಯುವುದು,

ಎಷ್ಟು ಇಂಟುಗಳಲ್ಲಿ ಪದೇ ಪದೇ
ಒಂಟಿತನ ಕಳೆಯದೇ
ತಾನೆ ಪೆಡಂಬೂತ ಬೆಳೆದಿರಲು
ಮಗ್ಗುಲಾಗುವ ಮುನ್ನ ಕದ್ದು ವಾಚುನೋಡುವುದು?

‘ ಎಷ್ಟು ಸಲವಾದರೂ ಯಾವುದದು
ಮತ್ತೆ ಮಿನುಗುವುದು, ತೆರೆಯುವುದು
ಹನಿಯುವುದು

ಹುಳಹುಪ್ಪಟೆಗೆ, ಗಂಧವತಿ ಇಳೆಗೆ
ಚಿಗುರುವ ಮರಕ್ಕೆ
ಹಾಗೂ ನಮಗೆ

ಇದೇ ಮೊದಲ ಸಲವೆಂಬಂತೆ ?’
-      ಯು.ಆರ್.ಅನಂತಮೂರ್ತಿ
1985

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ