ಜೀವನವೇ ಹೋರಾಟವಾದ ನನಗೆ ಸದಾ ಆ ಲೋಕದಿಂದ ದೂರವಾಗಿ ಆ ತಕ್ಷಣಕ್ಕಾದರೂ
ಈ ಜಂಜಡ ಜಗತ್ತನ್ನು ಮರೆತು ಪ್ರಕರತಿಯೊಂದಿಗೆ ಈ ಜಗತ್ತಿನೊಂದಿಗೆ ಬೆರೆಯಬೇಕೆಂಬ ಆಸೆ ಅದಕ್ಕಾಗಿ ನಾನು
ಸದಾ ಸಂಚಿಸರಿಸುತ್ತಲೆ ಇರುತ್ತೇನೆ, ಹೊಸ ವ್ಯಕ್ತಿತ್ವ, ಅನುಭವಗಳನ್ನು ಹುಡುಕುತ್ತಲೇ ಇರುತ್ತೇನೆ
ಇದಕ್ಕಾಗಿ ಆಗಾಗ ಸಂಚರಿಸುತ್ತಿರುವ ನಾನು ಹೇಗೋ ಸಾಗರದಲ್ಲಿ ಗೆಳೆಯನ ಮದುವೆಗೆ ಒಪ್ಪಿಕೊಂಡು ಹೊರಟುನಿಂತೆ
ಇತ್ತಿಚೆಗೆ ಎಲ್ಲೂ ಒಬ್ಬನೇ ಹೋಗದ ನಾನು ಸದಾ ಸಂಗಾತವನ್ನು ಬಯಸುವ ನಾನು ಮಹಾಂತೇಶನನ್ನು ಜತೆಗೆ ಕರೆದೊಯ್ದೆ.
ಯಾಕೋ ತೀರಾ ಬೇಸರದಮತೆ ಮನಸ್ಥಿತಿಯ ಎಲ್ಲ ಲಯಗಳು ತೇಲಾಡುತ್ತಿದ್ದವು. ನಾವು ರಾತ್ರಿ 11:20 ಕ್ಕೆ
ಸುಮಾರು ರೈಲು ಹತ್ತುವವರಿದ್ದಿವಿ ಹಾಗಾಗಿ ಮೊದಲೇ ರೈಲ್ವೇ ನಿಲ್ದಾಣಕ್ಕೆ ಹೋಗಿ ಅಲ್ಲಿನ ಜನ, ಪರಿಸ್ಥಿತಿಯ,
ಕತ್ತಲಾದ ನಂತರದ ಜಗತ್ತು ಇವನ್ನು ವಿನಮ್ರವಾಗಿ ನೋಡಬೇಕೆಂದು ಮೊದಲೇ ಬಸ್ಸುಹತ್ತಿ ಹೊರಟು ಯಶವಂತಪುರದಲ್ಲಿ
ಇಳಿದೆವು. ತಿಂದಿದ್ದರೂ ಸಹ ಸ್ವಲ್ಪ ಹೊಟ್ಟೆ ಹಸಿಯುತಿತ್ತು ತದಕಾರಣ ರೈಲ್ವೇ ನಿಲ್ದಾಣಗಳಲ್ಲಿ ನಾವು
ತಿನ್ನುವ ಯಾವ ಪದಾರ್ಥಗಳೂ ಸಿಗವೆಂದು ಅರಿತು ಹಾಗೇ ಸ್ವಲ್ಪ ಮುಂದೆ ಸಾಗಿದೆವು. ಸ್ವಲ್ಪ ದೂರಕ್ಕೆ
ಮುಂದೆ ಸಾಗಿದೆವು ಏಕೋ ನಮ್ಮ ಆಸೆ ಫಲಿಸದಂತೆ ಕಾಣಲಿಲ್ಲ. ನಂತರ ಸಮಯ ಮುಗಿಯುತದೆಂದು ಅಲ್ಲೆ ರೈಲ್ವೇ
ನಿಲ್ದಾಣಕ್ಕೆ ಇಲ್ಲೇ ಹಾರಬಹುದೇ ಕಾಲುದಾರಿ ಇದೆಯೇ ? ಎಂದು ವಿಚಾರಿಸಿಲಾಗಿ ಒಂದು ಅಂಡರ್ ಪಾಸ್ ಸಿಕ್ಕಿತು
ಅದರೊಲಗೆ ಹೊಕ್ಕುತ್ತಿದ್ದಂತೆಯೇ ಫೋಟೋಗ್ರಫಿ ಬಗೆಗೆ ಕನಸು ಕಾಣುವ ನಮಗೆ ಆ ಅಂಡರ್ ಪಾಸ್ ನಲ್ಲಿ ತೂಗಿಬಿಟ್ಟ
100 ಕ್ಯಾಂಡಲ್ ಬಲ್ಪುಗಳ ನನಗೆ ಸೂರಿ ಸಿನಿಮಾದ ಐಟಂ ಸಾಂಗಿಗೆ ತಯಾರಿಸಿಟ್ಟ ಸಿನಿಮಾ ಸೆಟ್ಟಿನಂತೆ
ಕಾಣಿತು. ಹಾಗೆ ಹೊರಹೋಗುತ್ತಿದ್ದಂತೆಯೇ ನಮಗೆ ಯಾವುದೋ ಮಾಂಸ ಸುಟ್ಟ ವಾಸನೆ ಮೂಗಿಗೆ ಬಡಿಯಿತು ಸತ್ತು
ಹೋಗಿದ್ದ ನಮ್ಮ ಮೂಗಿನ ನರಗಳು ನಿಯತ್ತಾಗಿ ಇನ್ನಷ್ಟು ವಾಸನೆಯನ್ನು ಗ್ರಹಿಸಲು ಸಿದ್ಧವಾದವು. ಎಕೋ
ನಮ್ಮ ಗುರಿ ಸಿಕ್ಕಂತೆ ಬಾಸವಾಯಿತು ಅಲ್ಲೆ 5 ರೂಪಾಯಿ ಹಾಕಿ ನೀರು ಹಿಡಿಯುವ ಜಂಕ್ಷನ್ ನಮ್ಮ ಎದುರಾಯಿತು
ತಕ್ಷಣ ಖಾಲಿಯಾದ ಸಣ್ಣ ಬಾಟಲ್ ಗೆ ಅಷ್ಟುಒಂದು ನೀರು ವ್ಯರ್ಥಮಾಡುವುದು ಹೇಗೆ ಎನ್ನುತ್ತಿದ್ದಂತೆ ಅಲ್ಲೊಬ್ಬ
ನಮ್ಮ ಪರಿಪಾಟಲು ನೋಡಿ ನೀರಿನ ಡಿಸ್ಪೆಂನ್ಸರ್ ಇಂದ ನಮ್ಮ ವಾಟರ್ ಬಾಟಲಿಗೆ ನೀರು ಸುರಿದ ಈ ಕಾರಣಲೋಸುಗ
ಆತ ಮನಪೂರ ಕುಡಿದಹಾಗೆ ಕಂಡಿತು. ಕುಡುಕರನ್ನು ಕೆಟ್ಟದಾಗಿ ಚಿತ್ರಿಸಿರುವ ನಮ್ಮ ಮನಸ್ಥಿತಿಗೆ ಆ ಕ್ಷಣಕ್ಕೆ
ನೀರು ನೀಡಿದ ಆತ ದೇವರಂತೆ ಕಂಡ. ಹಾಗೇ ಮುಂದೆ ಸಾಗಿದೆವು ಇಡೀ ಮಾರುಕಟ್ಟೆಯೇ ಕಂಡಿತು ಅದು ತರಾವರಿ
ಮಾಂಸದ ಮಾರುಕಟ್ಟೆ. ಇಡೀ ದಿನ ಬೆವರರಿಸಿದವರು, ಬೇಸತ್ತವರು, ಕೂಲಿಗಳು ಇತಿಯಹ ಜನ ಕೆಂಡದಮೇಲೆ ರುಚು
ರುಚಿಯಾಗಿ ಸುಡುತಿದ್ದ ಮಾಂಸ ಸೇವಿಸುತ್ತಿದ್ದರು. ಅದರಲ್ಲಿ ಬಹುಪಾಲು ಜನ ಮುಸ್ಲೀಂಮರೇ ಇದ್ದರು. ನಾವೂ
ಅಲ್ಲೇ ಇದ್ದೊಂದು ಮರದ ದಿಂಡಿನ ಮೇಲೆ ಕುಳಿತು ಒಂದು ಪ್ಲೇಟ್ ಪಾಲ್ ಆರ್ಡರ್ ಮಾಡಿದೆವು. ಆತ ಅಡಿಗೆ
ಎಣ್ಣೆ ಬಲಸದೆ ಉಪ್ಪು ಖಾರ ಖಡಕ್ಕಾಗಿ ಹಾಕಿ ಕೆಂಡದ ಮೇಲೆ ಸುಟ್ಟು ನಮ್ಮ ಕೈಗಿತ್ತ ಅದು ಖಾಲಿಯಾದುದೇ
ಗೊತ್ತಾಗಲಿಲ್ಲ. ಮತ್ತೊಂದು ಪ್ಲೇಟ್ ಖಾಡಿಯಾ ತೆಗೆದುಕೊಂಡು ಬೆರಳು ನೆಕ್ಕುವಷ್ಟು ಸವಿದು ಅಲ್ಲಿಂದ
ಅದರ ಘಮಲಲ್ಲೇ ರೈಲ್ವೇ ಸ್ಟೇಷನ್ನಿಗೆ ಹೊರೆಟೆವು. ಮಾಂಸ ಪ್ರಿಯರಾದ ಮನಗೆ ಇಷ್ಟುದಿನ ಇಂತಹ ಜಾಗ ಹೊಳೆದೇ
ಇರಲಿಲ್ಲವೆಂದು ಎಮದುಕೊಂಡು, ಮತ್ತೆ ಮಾಂಸ ತಿನ್ನಲು ಇಷ್ಟು ದೂರ ಬಂದರೂ ಸಹ ನಮ್ಮ ಸಮಯಕ್ಕೇನೂ ವ್ಯರ್ಥವಿಲ್ಲ
ಎಂದುಕೊಂಡೆವು. ಸಾಧ್ಯವಾದರೆ ನೀವೂ ಒಮ್ಮೆ ಆ ಮಾಂಸಲೋಕದ ಜಗತ್ತಿಗೊಮ್ಮೆ ಭೇಟಿಕೊಡಿ.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ